Song Details:- Presenting you “Ninna Kangala Bisiya Hanigalu Lyrics” written by Badavara Bandhu. The name of this song is Ninna Kangala Bisiya Hanigalu sung by Badavara Bandhu.

Ninna Kangala Bisiya Hanigalu Lyrics

ನಿನ್ನ ಕಂಗಳ ಬಿಸಿಯ ಹನಿಗಳು,
ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ,
ನೂರು ನೆನಪು ಮೂಡಿವೆ…

|| ನಿನ್ನ ಕಂಗಳ ಬಿಸಿಯ ಹನಿಗಳು,
ನೂರು ಕಥೆಯಾ ಹೇಳಿವೆ ||

ತಂದೆಯಾಗಿ ತಾಯಿಯಾಗಿ
ಮಮತೆಯಿಂದ ಬೆಳೆಸಿದೆ
ತಂದೆಯಾಗಿ ತಾಯಿಯಾಗಿ
ಮಮತೆಯಿಂದ ಬೆಳೆಸಿದೆ
ಬಿಸುಲು ಮಳೆಗೆ ನರಳದಂತೆ
ನಿನ್ನ ನೆರಳಲಿ ಸಲಹಿದೆ
ಆ ಪ್ರೀತಿಯ ಮನ ಮರೆವುದೆ….

|| ನಿನ್ನ ಕಂಗಳ ಬಿಸಿಯ ಹನಿಗಳು,
ನೂರು ಕಥೆಯಾ ಹೇಳಿವೆ ||

ಬಳ್ಳಿಯಂತೆ ಹಬ್ಬಿ ನಿನ್ನಾ
ಆಸರೆಯಲಿ ಬೆಳೆದೆನು,
ಆ…..ಆ…..ಆ….ಆ….
ಬಳ್ಳಿಯಂತೆ ಹಬ್ಬಿ ನಿನ್ನಾ
ಆಸರೆಯಲಿ ಬೆಳೆದೆನು
ನನ್ನ ತಾಯಿಯ ಪಾದದಾಣೆ
ಬೇರೆ ಏನನೂ ಅರಿಯೆನು
ನೀನೆ ನನ್ನ ದೇವನು….

|| ನಿನ್ನ ಕಂಗಳ ಬಿಸಿಯ ಹನಿಗಳು,
ನೂರು ಕಥೆಯಾ ಹೇಳಿವೆ ||

ನೀನು ನಕ್ಕರೆ ನಾನು ನಗುವೇ
ಅತ್ತರೇ ನಾ ಅಳುವೆನು
ನೀನು ನಕ್ಕರೆ ನಾನು ನಗುವೇ
ಅತ್ತರೇ ನಾ ಅಳುವೆನು
ನಿನ್ನ ಉಸಿರಲಿ ಉಸಿರು ಬೆರೆತಿದೇ
ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೇ ಬದುಕೆನು….

|| ನಿನ್ನ ಕಂಗಳ ಬಿಸಿಯ ಹನಿಗಳು,
ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ,
ನೂರು ನೆನಪು ಮೂಡಿವೆ.
ನೂರು ನೆನಪು ಮೂಡಿವೆ….||

Music Video

This is the end of Ninna Kangala Bisiya Hanigalu Lyrics.

Contact Us in case of any query or suggestion.